Barometer 

ವಾಯುಭಾರ ಮಾಪಕ  ವಾತಾವರಣದ ಒತ್ತಡವನ್ನು ಅಳೆಯುವ ಉಪಕರಣ.

Battery

ವಿದ್ಯುತ್ ಸಂಗ್ರಾಹಕ – ಹಲವು ವಿದ್ಯುತ್‌ಕೋಶಗಳನ್ನು ಒಂದು ಸರಣಿಯಲ್ಲಿ ಜೋಡಿಸಿರುವಂತಹ ವ್ಯವಸ್ಥೆ.

Beam

ಕಿರಣಪುಂಜ  ಒಂದೇ ದಿಕ್ಕಿನಲ್ಲಿ ಚಲಿಸುತ್ತಿರುವ ಆದರೆ ಸದಾ ಕಾಲ ಸಮಾನಾಂತರವಾಗಿಯೇನೂ ಇರದ ಬೆಳಕಿನ ಅಥವಾ ಇನ್ನಿತರ ವಿಕಿರಣಗಳ ಕಿರಣಸಮೂಹ.

Beats

ನಿಯತ ಹೊಡೆತ  ಎರಡು ಭಿನ್ನ ಆವರ್ತನಗತಿಗಳಿರುವ ಎರಡು ಅಲೆಗಳು ಒಟ್ಟಿಗೆ ಸೇರಿದಾಗ ಶಬ್ಧದ(ಅಥವಾ ಬೇರೆ) ಅಲೆಗಳ ತೀಕ್ಷ್ಣತೆಯಲ್ಲಿ ಉಂಟಾಗುವ ನಿಯತವಾದ ಏರುಪೇರು.

ಕವಿನುಡಿ – ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ.

ಕುವೆಂಪು ಅವರು ಬರೆದ ಸಾಲಿದು. `ದೋಣಿ ಸಾಗಲಿ ಮುಂದೆ ಹೋಗಲಿ ಗೇಯಕವಿತೆಯ(ಹಾಡಲಾಗುವ ಕವಿತೆ) ಕೊನೆಯ ಸಾಲು. ನಿನ್ನೆಯ ಚಿಂತೆ, ನಾಳಿನ ಚಿಂತೆ ನಮ್ಮ ಇಂದಿನ ಸಮಯವನ್ನು ಹಾಳು ಮಾಡುತ್ತದೆ. ಹೀಗಾಗಿ ಇವತ್ತು ನಮ್ಮ ಕೈಯಲ್ಲಿ ಏನಿದೆಯೋ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು, ನಿನ್ನೆಯನ್ನು ನಾವು ಬದಲಾಯಿಸಲಾಗುವುದಿಲ್ಲ,

ಸಂಸಾರ ಎಂಬ ಪದಕ್ಕಿರುವ ಅರ್ಥವಿಸ್ತಾರ ……..ಅಬ್ಬ!

ಪದಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥಗಳನ್ನು ಕೊಡುತ್ತವೆ ಎಂಬುದು ಭಾಷಾ ಕುತೂಹಲಿಗಳಿಗೆ ಗೊತ್ತಿರುವ ವಿಷಯವೇ ಆಗಿದೆ. ಉದಾಹರಣೆಗೆ ಇರುವೆ, ಅರಸು, ಹತ್ತು, ಹರಿ …… ಇಂತಹ ಪದಗಳಿಗಿರುವ ವಿವಿಧ ಅರ್ಥಗಳು. ಈ ಹಿನ್ನೆಲೆಯಲ್ಲಿ ಸಂಸಾರ ಎಂಬ ಪದವನ್ನು ಗಮನಿಸಬಹುದು.

Ballistics

ಕ್ಷಿಪಣಿ ಪಥ ಅಧ್ಯಯನ – ಮುಂದಕ್ಕೆಸೆಯಲಾಗುವ ವಸ್ತುಗಳ ಅದರಲ್ಲೂ ಕ್ಷಿಪಣಿಗಳ ಪಥಚಲನೆಯ ಅಧ್ಯಯನ.

Background radiation

ಹಿನ್ನೆಲೆ ವಿಕಿರಣ – ಭೂಮಿಯ ಮೇಲ್ಮೈಯಲ್ಲಿ ಮತ್ತು ವಾತಾವರಣದಲ್ಲಿ ಸದಾ ಇರುವ ಸಹಜವಾದ, ಕಡಿಮೆ ತೀಕ್ಷ್ಣತೆಯ, ಪರಮಾಣುಗಳನ್ನು ವಿದ್ಯುತ್‌ಕಣಗಳನ್ನಾಗಿಸುವ ಸಾಮರ್ಥ್ಯವುಳ್ಳ ವಿಕಿರಣ.

Band spectrum

ಪಟ್ಟಿಪಟ್ಟಿ ವರ್ಣಪಟಲ – ಹೀರಿಕೊಂಡ ಅಥವಾ ಹೊರಗೆ ಬಿಟ್ಟ ವಿಕಿರಣದಿಂದಾಗಿ ಪಟ್ಟಿಪಟ್ಟಿಯಾಗಿ ತೋರಿಬರುವ ವರ್ಣಪಟಲ. 

Balmer Series 

ಬಾಲ್ಮರ್ ಸರಣಿ – ಜಲಜನಕದ ಪರಮಾಣುಗಳ ವರ್ಣಪಟಲದ ಗೆರೆಗಳ ಅಧ್ಯಯನ.

Page 132 of 140

Kannada Sethu. All rights reserved.