ಕನ್ನಡದ ನವ್ಯಕಾವ್ಯದ ಪ್ರವರ್ತಕರು ಎಂದು ಹೆಸರಾದ ಶ್ರೀ ಎಂ.ಗೋಪಾಲಕೃಷ್ಣ ಅಡಿಗರ `ಯಾವ ಮೋಹನ ಮುರಳಿ ಕರೆಯಿತು ಭಾವಗೀತೆಯನ್ನು ಕೇಳದ ಕನ್ನಡಿಗರು ಅಪರೂಪ ಅನ್ನಿಸುತ್ತೆ. ಬಹುಶಃ ಕನ್ನಡದ ಅತ್ಯಂತ ಪ್ರಸಿದ್ಧ ಭಾವಗೀತೆಗಳಲ್ಲಿ ಇದೂ ಒಂದು. ಈ ಭಾವಗೀತೆಯ ಕೊನೆಯ ಸಾಲು ಮೇಲಿನದು. ಭೂಮಿಯ ಮೇಲೆ ಸುಖಭೋಗಗಳ ನಡುವೆ ಬದುಕುತ್ತಿದ್ದರೂ ಮನಸ್ಸು ಎಲ್ಲೋ ಓಡುವ, ಏನನ್ನೋ ಹುಡುಕುವ ಬಗ್ಗೆ ಈ ಕವಿತೆ ಮಾತಾಡುತ್ತದೆ.
(ಶಕಿ) ಪಟ್ಟಿಗಳು – ಹರಳುರೂಪಿಯಾದ ಒಂದು ಘನವಸ್ತುವಿನಲ್ಲಿ ಎಲೆಕ್ಟ್ರಾನೊಂದಕ್ಕೆ ಇರಬಹುದಾದ ಶಕ್ತಿ ಮೌಲ್ಯಗಳು.
ಪರಮಾಣೀಯ ಸಂಖ್ಯೆ ಒಂದು ಪರಮಾಣುವಿನ ಬೀಜಕೇಂದ್ರದಲ್ಲಿರುವ ಪ್ರೋಟಾನುಗಳ ಸಂಖ್ಯೆ. ಇದು ಆ ಬೀಜಕೇಂದ್ರವನ್ನು ಸುತ್ತುತ್ತಿರುವ ಎಲೆಕ್ಟ್ರಾನುಗಳ ಸಂಖ್ಯೆಗೆ ಸಮವಾಗಿರುತ್ತದೆ.
ಆಲ್ಫಾ ಕಣ – ಕೆಲವು ವಿಕಿರಣ ವಸ್ತುಗಳು ಹೊರಚೆಲ್ಲುವ ಹೀಲಿಯಂ ಬೀಜಕೇಂದ್ರಗಳು.
ಪರ್ಯಾಯ ವಿದ್ಯುತ್ತಿನ ಮಂಡಲ – ಪರ್ಯಾಯ ವಿದ್ಯುತ್ತಿನ ಆಕರದಿಂದ ವಿದ್ಯುತ್ತನ್ನು ಪಡೆಯುವಂತಹ ವಿದ್ಯುನ್ಮಂಡಲ.
ಪರ್ಯಾಯ ವಿದ್ಯುದುತ್ಪಾದಕ : ಪರ್ಯಾಯ ವಿದ್ಯುತ್ತನ್ನು ಉತ್ಪಾದಿಸುವಂತಹ ಉಪಕರಣ.
ಬದಲಾಗದ ಬಂಧವುಳ್ಳದ್ದು – ಒಟ್ಟಿಗೆ ಕುದಿಯುವಾಗ ತಮ್ಮ ಬಂಧದಲ್ಲಿ ಯಾವುದೇ ವ್ಯತ್ಯಾಸ ತೋರದ ಎರಡು ದ್ರವಗಳ ಮಿಶ್ರಣ.
Like us!
Follow us!