Attenuation

ಶಕ್ತಿಗುಂದುವಿಕೆ – ಒಂದು ವಸ್ತುವಿನೊಳಗೆ ಹಾದು ಹೋಗುವಾಗ ವಿಕಿರಣದ ಸಾಮರ್ಥ್ಯವು ಕಡಿಮೆಯಾಗುವುದು.

Aurora Borealis

ಉತ್ತರಧ್ರುವ ಅರುಣಜ್ಯೋತಿ – ಉತ್ತರಧ್ರುವದಲ್ಲಿ ಕಾಣಿಸುವ ಬಣ್ಣಬಣ್ಣದ ಬೆಳಕು (ಮುಖ್ಯವಾಗಿ ಕೆಂಪು ಮತ್ತು ಹಸಿರು)

Autoclave

ಕ್ರಿಮಿನಾಶಕ ಪಾತ್ರೆ – ಹೆಚ್ಚಿನ ಉಷ್ಣತೆ ಮತ್ತು ಒತ್ತಡದಲ್ಲಿ ಕ್ರಿಮಿಗಳನ್ನು ನಾಶ ಮಾಡುವ ಗಟ್ಟಿಯಾದ ಪಾತ್ರೆ.

Avalanche

ವಿದ್ಯುದಣು ಸುಗ್ಗಿ – ಕೇವಲ ಒಂದೇ ಬಾರಿಯ ವಿದ್ಯುದಣುಗೊಳಿಸುವಿಕೆಯಿಂದ ವಿಪುಲ ಸಂಖ್ಯೆಯ ವಿದ್ಯುದಣುಗಳು ಸೃಷ್ಟಿಯಾಗುವ ಪ್ರಕ್ರಿಯೆ.

ತನ್ನ ಬೆನ್ನು ತನಗೆ ಕಾಣಲ್ಲ

ಇದು ಕನ್ನಡದ ಒಂದು ಪ್ರಸಿದ್ಧ ಗಾದೆಮಾತು. ಸಾಮಾನ್ಯವಾಗಿ ಮನುಷ್ಯರು ತಾವು ಮಾಡುವ ತಪ್ಪುಗಳಿಗೆ ಕುರುಡಾಗಿರುತ್ತಾರೆ. ತಾವು ಮಾಡುವುದು ಸರಿ ಎಂಬ ಭಾವ ಸದಾ ಅವರಲ್ಲಿ ಇರುತ್ತದೆ. ಇನ್ನೊಬ್ಬರ ತಪ್ಪನ್ನು ಬೇಗ ಕಂಡುಹಿಡಿಯುವ ಜನರು ತಮ್ಮ ತಪ್ಪನ್ನು ಬೇಗ ಅರ್ಥ ಮಾಡಿಕೊಳ್ಳುವುದಿಲ್ಲ. ಹೇಗೆ ನಮ್ಮ ಬೆನ್ನು ನಮಗೆ ಕಾಣುವುದಿಲ್ಲವೋ ಹಾಗೆ ನಮ್ಮ ತಪ್ಪು ನಮಗೆ ಅರ್ಥವಾಗುವುದಿಲ್ಲ ಎಂಬುದು ಈ ಗಾದೆ ಮಾತಿನ ಅರ್ಥ.

ಆಡುಗನ್ನಡದಲ್ಲಿ ಎಷ್ಟು `ಕನ್ನಡ ಇರಬೇಕು?

ನಮಗೆ ವಿದ್ಯಾವರ್ಧಕ ಸಂಘ ಮಹಾವಿದ್ಯಾಲಯದ ಪದವಿಪೂರ್ವ ತರಗತಿಯಲ್ಲಿ(೧೯೮೬-೮೮) ಕನ್ನಡ ಪಾಠ ಮಾಡುತ್ತಿದ್ದ ನಾಗಲಕ್ಷ್ಮಿ ಮೇಡಂ ಅವರು, `ಸಮಯ ಎಷ್ಟಾಯ್ತು?. `ಎಷ್ಟನೇ ಪುಟಕ್ಕೆ ಪಾಠ ನಿಲ್ಲಿಸಿದ್ದೆ?, `ತರಗತಿಗೆ ಬರಕ್ಕೆ ಯಾಕೆ ತಡ ಆಯ್ತು? ………. ಹೀಗೆ ಬೆಂಗಳೂರಿನಲ್ಲಿ `ಸಾಮಾನ್ಯವಾಗಿ ಬಳಸದ ಹಾಗೆ ೯೯% ಕನ್ನಡ ಬಳಸುತ್ತಿದ್ದರು.

Axis

ಅಕ್ಷರೇಖೆ – ಒಂದು ವಸ್ತು ಅಥವಾ ವ್ಯವಸ್ಥೆಯು ಯಾವ ರೇಖೆಯ ಸುತ್ತ ಸುತ್ತುತ್ತದೋ ಆ ರೇಖೆ. 

Astigmatism

ಅಸಮದೃಷ್ಟಿ – ಸರ್ವೇಸಾಮಾನ್ಯವಾದ ಒಂದು ದೃಷ್ಟಿದೋಷ ಇದು. ಒಂದೇ ದೂರದಲ್ಲಿರುವ ಉದ್ದುದ್ದಕ್ಕಿರುವ ಹಾಗೂ ಅಡ್ಡಡ್ಡಕ್ಕಿರುವ ವಸ್ತುಗಳನ್ನು ಒಟ್ಟಿಗೇ ನೋಡಿದಾಗ ಅವನ್ನು ಬೇರೆ ಬೇರೆಯಾಗಿ ಗ್ರಹಿಸಲು ಸಾಧ್ಯವಾಗದ ದೃಷ್ಟಿದೋಷ.

Astronomy 

ಖಗೋಳ ವಿಜ್ಞಾನ – ಭೂಮಿಯ ವಾತಾವರಣದ ಆಚೆಗೆ ಇರುವ ವಿಶ್ವದ ಅಧ್ಯಯನ.

Asymptote

ವಕ್ರಾಕರ್ಷಿತ ಸರಳರೇಖೆ – ಅನಂತದೆಡೆಗೆ ಸಾಗುತ್ತಿರುವ ವಕ್ರರೇಖೆಯೊಂದನ್ನು ಮುಟ್ಟಲು ಯತ್ನಿಸುತ್ತಿರುವ ಸರಳರೇಖೆ.

Page 134 of 140

Kannada Sethu. All rights reserved.