ಬೆಂಗಳೂರಿನ ಕೋಣನಕುಂಟೆಯಲ್ಲಿ ಒಂದು ಮಹಿಖಾ ಸಂಘವಿದೆ, ‘ಆದರ್ಶ ಮಹಿಳಾ ಸಂಘ’ ಎಂದು ಅದರ ಹೆಸರು. ನೂರೈವತ್ತಕ್ಕೂ ಹೆಚ್ಚು ಸದಸ್ಯೆಯರಿರುವ ಸಂಘ ಇದು. ಇದನ್ನು ಕಳೆದ ಹದಿನಾಲ್ಕು ವರ್ಷಗಳಿಂದ ಸಕ್ರಿಯವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಇದರ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಹಾಗೂ ಅವರ ಸಮರ್ಥ ಬಳಗದವರು. ಹೆಂಗಸರಿಗೆ ಜೀವನೋತ್ಸಾಹ ಮೂಡಿಸುವ ಅನೇಕ ಒಳ್ಳೆಯ ಮೌಲ್ಯ, ಆಚರಣೆ, ಅಭ್ಯಾಸ ಹಾಗೂ ಕಾರ್ಯಕ್ರಮಗಳ ಮೊತ್ತವಾಗಿದೆ ಈ ಸಂಘ. 11-11-2025ರಂದು ನಡೆದ ಈ ಸಂಘದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನಗೆ ಒದಗಿ […]
ಐಸೋಥರ್ಮಲ್ ಟ್ರ್ಯಾನ್ಸ್ಫಾರ್ಮೇಷನ್ – ಸಮೋಷ್ಣ ಪರಿವರ್ತನೆ – ಉಷ್ಣಚಲನಾ ಶಾಸ್ತ್ರದಲ್ಲಿ ಸರ್ವೇಸಾಮಾನ್ಯವಾಗಿ ಬಳಸುವ ಪದ. ಸ್ಥಿರವಾದ ಉಷ್ಣತೆಯಲ್ಲಿ ಒಂದು ವಸ್ತುವಿನಲ್ಲಿ ಉಂಟಾಗುವ ಬದಲಾವಣೆಯನ್ನು ಇದು ಹೇಳುತ್ತದೆ.
ಐಸೋಥರ್ಮಲ್ ಪ್ರೋಸೆಸ್ – ಸಮತಾಪ ಅಥವಾ ಸಮೋಷ್ಣ ಪ್ರಕ್ರಿಯೆ – ತನ್ನ ಉದ್ದಕ್ಕೂ ಉಷ್ಣತೆಯು ಸ್ಥಿರವಾಗಿರುವಂತಹ ಪ್ರಕ್ರಿಯೆ. ಇದರಲ್ಲಿ ವ್ಯವಸ್ಥೆಯು, ಬದಲಾವಣೆಯುದ್ದಕ್ಕೂ ತನ್ನ ಸುತ್ತಮುತ್ತಲ ಪರಿಸರದೊಂದಿಗೆ ಸಮತೋಲನದಲ್ಲಿರುತ್ತದೆ.
ಐಸೋಥರ್ಮ್ – ಸಮತಾಪರೇಖೆ – ಸಮ ಉಷ್ಣತೆಯುಳ್ಳ ಬಿಂದುಗಳು ಸೇರುತ್ತಾ ಹೋಗುವ ಒಂದು ರೇಖೆ ಅಥವಾ ರೇಖಾಚಿತ್ರ.
ಐಸೋಮಾರ್ಫಿಸಂ. – ಸಮರೂಪತೆ – ರಾಸಾಯನಿಕವಾಗಿ ಪರಸ್ಪರ ಸಂಬಂಧ ಹೊಂದಿರುವ ವಸ್ತುಗಳಲ್ಲಿನ ಹರಳುಗಳ ರೂಪ ಅಥವಾ ರಚನೆಯಲ್ಲಿನ ಸಮತೆ.
ಐಸೋಮೆಟ್ರಿಕ್ ಚೇಂಜ್ – ಪರಿಮಾಣೀಯ ಬದಲಾವಣೆ – ಸ್ಥಿರಪರಿಮಾಣದ ಒಂದು ಅನಿಲದಲ್ಲಿ ಉಂಟಾಗುವ ಬದಲಾವಣೆ.
ಐಸೋಮರ್ಸ್ – ಸಮಾಂಗಿಗಳು – ಸಮಾನ ಅಣುತೂಕ ಮತ್ತು ಸಮಾನ ಶೇಕಡಾವಾರು ವಸ್ತುಸಂಯೋಜನೆಗಳನ್ನು ಹೊಂದಿದ್ದು, ತಮ್ಮ ಕೆಲವು ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳಲ್ಲಿ ಭಿನ್ನವಾಗಿರುವ ಸಂಯುಕ್ತಗಳು.
ಐಸೋಮ್ಯಾಗ್ನೆಟಿಕ್ ಲೈನ್ಸ್ – ಕಾಂತಬಲವು ಸಮಾನವಾಗಿರುವ ಬಿಂದುಗಳನ್ನು ಜೋಡಿಸುವ ರೇಖೆಗಳು.
Like us!
Follow us!