ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Magneto optical effects

ಮ್ಯಾಗ್ನೆಟೋ ಆಪ್ಟಿಕಲ್ ಎಫೆಕ್ಟ್ಸ್ – ಕಾಂತೀಯ ದೃಶ್ಯಬೆಳಕು ಪರಿಣಾಮಗಳು – ಬಾಹ್ಯ ಕಾಂತಕ್ಷೇತ್ರವು ಬದಲಾದಾಗ ವಸ್ತುವಿನ ದೃಶ್ಯಬೆಳಕು ವರ್ತನೆಗಳಲ್ಲಿ ಆಗುವ ಪರಿಣಾಮಗಳು‌, ಉದಾಹರಣೆಗೆ, ಫ್ಯಾರಡೇ ಪರಿಣಾಮ ಹಾಗೂ ಕೆನ್ ಪರಿಣಾಮ.

Magneto resistance effect

ಮ್ಯಾಗ್ನೆಟೋ ರೆಸಿಸ್ಟೆನ್ಸ್ ಎಫೆಕ್ಟ್ – ಕಾಂತೀಯ ನಿರೋಧಕ ಪರಿಣಾಮ – ಬಾಹ್ಯ ಕಾಂತಕ್ಷೇತ್ರವು ಬದಲಾದಾಗ ಪ್ರಯೋಗಕ್ಕೆ ಆಯ್ದ ವಸ್ತುವಿನ‌ ವಿದ್ಯುತ್ ನಿರೋಧಕತೆಯಲ್ಲಿ ಉಂಟಾಗುವಂತಹ ಬದಲಾವಣೆ‌.

Magnetocaloric effect

ಮ್ಯಾಗ್ನೆಟೋಕ್ಯಲೋರಿಕ್ ಎಫೆಕ್ಟ್ – ಕಾಂತೀಯ ಶಕ್ತಿಮಾನ ಪರಿಣಾಮ – ಬಾಹ್ಯ ಕಾಂತಕ್ಷೇತ್ರವು ಬದಲಾದಂತೆ, ವಸ್ತುವಿನ ಉಷ್ಣತೆಯಲ್ಲಿ ಕಂಡುಬರುವ ಬದಲಾವಣೆ -ಈ ಪರಿಣಾಮವನ್ನು ತುಂಬ ಕಡಿಮೆ ಉಷ್ಣತೆ ( ಪರಮ ಶೂನ್ಯದಷ್ಟು) ಯನ್ನು ಉತ್ಪತ್ತಿ ಮಾಡಲು ಬಳಸುತ್ತಾರೆ.

Magnetometer

ಮ್ಯಾಗ್ನೆಟೋಮೀಟರ್ – ಕಾಂತಕ್ಷೇತ್ರ ಮಾಪಕ – ಇದು ಒಂದು ರೀತಿಯ ದಿಕ್ಸೂಚಿ. ಇದನ್ನು ಕಾಂತಕ್ಷೇತ್ರಗಳ ಶಕ್ತಿಯನ್ನು ತುಲನೆ ಮಾಡಲು ಬಳಸುತ್ತಾರೆ.

Magneton

ಮ್ಯಾಗ್ನೆಟಾನ್ – ಮ್ಯಾಗ್ನೆಟಾನ್  – ಬೀಜಕೇಂದ್ರೀಯ ಪರಮಾಣು ಅಥವಾ ಅಣು ಅಯಸ್ಕಾಂತದ ಕಾಂತೀಯ ತಿರುಗುಬಲವನ್ನು ಅಳೆಯಲು ಬಳಸುವ ಒಂದು ಮೂಲಮಾನ.

Magnetosphere

ಮ್ಯಾಗ್ನೆಟೋಸ್ಫಿಯರ್ – ಕಾಂತಗೋಳ ಅಥವಾ ಕಾಂತಮಂಡಲ – ಇದು ಭೂಮಿ ಮತ್ತು ಅದರಂತಹ ಇತರ ಕಾಂತಗುಣೀ ಗ್ರಹಗಳನ್ನು ಸುತ್ತುವರಿದಿರುವ ಧೂಮಕೇತು ಆಕಾರದ ಪ್ರದೇಶ. ಇದರಲ್ಲಿನ ಸೌರವ್ಯೂಹ ಸಂಬಂಧೀ ವಿದ್ಯುದಂಶಗಳನ್ನು ಸೂರ್ಯನ ಕಾಂತಕ್ಷೇತ್ರವು ನಿಯಂತ್ರಿಸುವುದಕ್ಕಿಂತ ಹೆಚ್ಚಾಗಿ ಆ ಗ್ರಹದ ಕಾಂತಕ್ಷೇತ್ರವೇ ನಿಯಂತ್ರಿಸುತ್ತದೆ.

Magnetron

ಮ್ಯಾಗ್ನೆಟ್ರಾನ್ – ಕಾಂತೀಯ ಕಣವೇಗವರ್ಧಕ – ಇದೊಂದು ನಿರ್ವಾತ ಕೊಳವೆ ; ಇದರಲ್ಲಿ ಅಪೇಕ್ಷಿತ ವಿದ್ಯುತ್ ಕಾಂತೀಯ ಅಲೆಗಳನ್ನು ( ಆವರ್ತನಗತಿಗಳನ್ನು) ಪಡೆಯಲು, ಎಲೆಕ್ಟ್ರಾನುಗಳ ಪ್ರವಾಹವನ್ನು ಆನ್ವಯಿಕ ಕಾಂತಕ್ಷೇತ್ರದಿಂದ ನಿರ್ಬಂಧಿಸಲಾಗುತ್ತದೆ.

Magnification

ಮ್ಯಾಗ್ನಿಫಿಕೇಷನ್ – (ಬಿಂಬ) ವರ್ಧನ – ಒಂದು ಮಸೂರ, ಕನ್ನಡಿ ಅಥವಾ  ಯಾವುದೇ ಉಪಕರಣವು ಒಂದು ವಸ್ತುವಿನ ಬಿಂಬವನ್ನು ವರ್ಧಿಸುವ ಅಳತೆ/ ಪ್ರಕ್ರಿಯೆ ಇದು.

Magnifying glass

ಮ್ಯಾಗ್ನಿಫೈಯಿಂಗ್ ಗ್ಲಾಸ್ – ವರ್ಧನಾ ಮಸೂರ – ಒಂದು ಉಬ್ಬು ಮಸೂರ. ಇದನ್ನು ಸೂಕ್ಷ್ಮದರ್ಶಕದಲ್ಲಿ‌ ಬಳಸುತ್ತಾರೆ.

Magnifying power

ಮ್ಯಾಗ್ನಿಫೈಯಿಂಗ್ ಪವರ್ – ವರ್ಧನಾ ಸಾಮರ್ಥ್ಯ – ಒಂದು ಬಿಂಬವನ್ನು ಎಷ್ಟರ ಮಟ್ಟಿಗೆ ಒಂದು ಮಸೂರವು ದೊಡ್ಡದಾಗಿಸಬಲ್ಲುದು ಎಂಬುದರ ಅಳತೆ ಇದು‌.

Page 99 of 100

Kannada Sethu. All rights reserved.