ಮ್ಯಾಗ್ನಾಕ್ಸ್ – ಮ್ಯಾಗ್ನಾಕ್ಸ್ – ಕೆಲವು ನಿರ್ದಿಷ್ಟ ಅಣುಸ್ಥಾವರಗಳಲ್ಲಿ ಇಂಧನದ ಮೂಲವಸ್ತುಗಳನ್ನು ಹಾಕಿಡಲು ಬಳಸುವ, ಮ್ಯಾಗ್ನೀಷಿಯಂ ಮಿಶ್ರಲೋಹಗಳ ವ್ಯಾಪಾರೀ ತಯಾರಿಕೆಯ ಒಂದು ಹೆಸರು.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಮ್ಯಾಗ್ನಸ್ ಎಫೆಕ್ಟ್ – ಮ್ಯಾಗ್ನಸ್ ಪರಿಣಾಮ- ಹೆನ್ರಿಚ್ ಗುಸ್ತಾವ್ ಮ್ಯಾಗ್ನಸ್ (1802-1870) ಎಂಬ ಜರ್ಮನಿ ದೇಶದ ಭೌತವಿಜ್ಞಾನಿಯು ಕಂಡು ಹಿಡಿದಿದ್ದರಿಂದ ಅವನದೇ ಹೆಸರುಳ್ಳ ಪರಿಣಾಮ. “ದ್ರವವೊಂದರ ಒತ್ತಡವು ಅದರ ವೇಗವು ಹೆಚ್ಚಿರುವ ಬಿಂದುಗಳಲ್ಲಿ ಕಡಿಮೆಯಾಗುತ್ತದೆ”. ಗಾಳಿಯಲ್ಲಿ ವೇಗವಾಗಿ ತಿರುಗುತ್ತಾ ಚಲಿಸುತ್ತಿರುವ ಚೆಂಡು ತನ್ನ ಸುತ್ತಲಿನ ಗಾಳಿಯನ್ನು ಸ್ವಲ್ಪ ಮಟ್ಟಿಗೆ ಸೆಳೆದುಕೊಳ್ಳುತ್ತದೆ. ಇದೇ ಮ್ಯಾಗ್ನಸ್ ಪರಿಣಾಮ.
ಮೇಜರ್ ಡಯಾಟಾನಿಕ್ ಸ್ಕೇಲ್ – ಅಷ್ಟಸ್ವರ ಶ್ರೇಣಿ – ಸಂಗೀತದಲ್ಲಿನ ಅಷ್ಟಸ್ವರಗಳ ಶ್ರೇಣಿ (ಸರಿಗಮಪದನಿಸ).
ಮೆಜಾರಿಟಿ ಕ್ಯಾರಿಯರ್ – ಬಹುಭಾಗ ಒಯ್ಯಕ – (ಅರೆವಾಹಕಗಳಲ್ಲಿ) ಒಟ್ಟು ವಿದ್ಯುದಂಶ ಒಯ್ಯಕ ರಾಶಿಯಲ್ಲಿ ಅರ್ಧಕ್ಕಿಂತ ಹೆಚ್ಚು ವಿದ್ಯದಂಶವನ್ನು ಒಯ್ಯವ ರೀತಿಯ ಒಯ್ಯಕ.
ಮೇಕಿಂಗ್ ಕರೆಂಟ್ – ಮಂಡಲ ಭಂಜಕ – ಒಂದು ವಿದ್ಯುನ್ಮಂಡಲವನ್ನು ಭಂಜಿಸುವ (ಮುರಿಯುವ) ಭಂಜಕ ಅಥವಾ ಇಂಥದ್ದೇ ಉಪಕರಣ. ವಿದ್ಯುನ್ಮಂಡಲದಲ್ಲಿ ತಪ್ಪು ಸಂಪರ್ಕ ( ಶಾರ್ಟ್ ಸರ್ಕ್ಯೂಟ್) ಉಂಟಾದಾಗ ನಂತರದ ಪ್ರಥಮ ಸುತ್ತಿನಲ್ಲಿ ಉತ್ಪತ್ತಿಯಾಗುವ ವಿದ್ಯುತ್ತಿನ ಗರಿಷ್ಠ ಮೌಲ್ಯ.
ಮ್ಯಾಕ್ಸುಟೋವ್ ಟೆಲಿಸ್ಕೋಪ್ – ಮ್ಯಾಕ್ಸುಟೋವ್ ದೂರದರ್ಶಕ – ಉಕ್ರೇನ್ ದೇಶದ ಬೆಳಕು ವಿಜ್ಞಾನಿ ಹಾಗೂ ಹವ್ಯಾಸಿ ಖಗೋಳಶಾಸ್ತ್ರಜ್ಞನಾಗಿದ್ದ ಡಿಮಿಟ್ರಿ ಡಿಮಿಟ್ರಿವಿಚ್ ಮಾಕ್ಸುಟೋವ್ ( 23-4-1896 ರಿಂದ 12-08-1964) ಕಂಡುಹಿಡಿದ ದೂರದರ್ಶಕ. ಇದರಲ್ಲಿ ತಗ್ಗಿರುವ ( ನಿಮ್ನ) ಗೋಳಾಕಾರದ ಮಸೂರ ಇರುತ್ತದೆ.
ಮಾಲ್ಟರ್ ಎಫೆಕ್ಟ್ – ಮಾಲ್ಟರ್ ಪರಿಣಾಮ- ಅಮೇರಿಕಾದ ಭೌತವಿಜ್ಞಾನಿ ಲ್ಯೂಯಿಸ್ ಮಾಲ್ಟರ್ (28-04-1907 ರಿಂದ 07-05-1985) ಕಂಡುಹಿಡಿದು ಮೊದಲು ವಿವರಿಸಿದ ಪರಿಣಾಮ ಇದು. ಒಂದು ಅವಾಹಕ ಮೇಲ್ಮೈ ಪೊರೆಯುಳ್ಳ ಲೋಹವೊಂದು ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಾನುಗಳನ್ನು ಹೊತಸೂಸುವ ಪ್ರಕ್ರಿಯೆ ಇದು. ಉದಾಹರಣೆಗೆ ಉತ್ಕರ್ಷಿಸಿದ ( ಆಕ್ಸೈಡೀಕರಿಸಿದ) ನಂತರ ಸೀಸಿಯಂ ಆಕ್ಸೈಡನ್ನು ಲೇಪಿಸಿದ ಅಲ್ಯುಮಿನಿಯಂ ಲೋಹ.
ಮ್ಯಾನೋಮೀಟರ್ – ಒತ್ತಡಮಾಪಕ – ತನ್ನ ಸರಳ ರೂಪದಲ್ಲಿ, ಇಂಗ್ಲಿಷ್ ಅಕ್ಷರ ‘ಯು’ ಆಕಾರದ ಕೊಳವೆ ಹಾಗೂ ಪಾದರಸದ ಉಪಯೋಗ ಇರುವಂತಹ ಉಪಕರಣ ಇದು. ಒತ್ತಡವನ್ನು ಅಳೆಯಲು ಉಪಯೋಗಿಸುವ ಒಂದು ಉಪಕರಣ.
ಮೇಸರ್ – ಮೇಸರ್ – ಲೇಸರ್ ನಂತೆ, ವಿದ್ಯುತ್ಕಾಂತೀಯ ಅಲೆಗಳ ಸುಸಂಬದ್ಧ ಪುಂಜವನ್ನು ಉತ್ಪಾದಿಸುವ ಶಕ್ತಿಶಾಲೀ ಆಕರ. ಆದರೆ ಲೇಸರ್ ಗಿಂತ ಭಿನ್ನವಾಗಿ, ಮೇಸರ್ ನಲ್ಲಿ ಕಣ್ಣಿಗೆ ಕಾಣದ ಬೆಳಕಿನ ವಿದ್ಯುತ್ಕಾಂತೀಯ ಅಲೆಗಳನ್ನು ಬಳಸಿಕೊಳ್ಳುತ್ತಾರೆ.
Like us!
Follow us!